Nothing found
Thank you! Your submission has been received!
Oops! Something went wrong while submitting the form.

ರೋಗಪತ್ತೆಯಾಗದ ಸ್ಥಿತಿಯಲ್ಲಿರುವುದು ಎಂಬುದರ ಅರ್ಥವೇನು?

ಒಬ್ಬ ವ್ಯಕ್ತಿಗೆ ಎಚ್.ಐ.ವಿ ಇದ್ದಾಗ್ಯೂ ಅವರು ಔಷಧಗಳನ್ನು ನಿಯಮಿತವಾಗಿ ಸೇವಿಸಿ ದೇಹದಲ್ಲಿ ರೋಗಾಣುವಿನ ಪ್ರಭಾವವನ್ನು ನಿಯಂತ್ರಣದಲ್ಲಿರಿಸಿಕೊಂಡರೆ, ಅಂಥವರು ರೋಗ ಪತ್ತೆಯಾಗದ (ಅನ್ ಡಿಟೆಕ್ಟೆಬಲ್) ಸ್ಥಿತಿಯಲ್ಲಿರುತ್ತಾರೆ. ಅಂಥವರಲ್ಲಿ ರೋಗಾಣು ವಾಸ್ತವವಾಗಿ ಅದೆಷ್ಟು ಹತೋಟಿಯಲ್ಲಿರುತ್ತದೆ ಎಂದರೆ, ಅವರ ರಕ್ತದ ತಪಾಸಣೆ ಮಾಡಿದಾಗಲೂ ರೋಗಾಣು ಪತ್ತೆಯಾಗುವುದಿಲ್ಲ.

ವಿಜ್ಞಾನ ಧೃಢಪಡಿಸುವಂತೆ, ಎಚ್.ಐ.ವಿ. ಹೊಂದಿರುವ ವ್ಯಕ್ತಿಯು ರೋಗಪತ್ತೆಯಾಗದ ಸ್ತಿತಿಯಲ್ಲಿರುವಾಗ ಆರೋಗ್ಯವಂತರಾಗಿರುತ್ತಾರೆ ಮಾತ್ರವಲ್ಲದೇ ಅವರು ಇತರರಿಗೆ ಎಚ್.ಐ.ವಿ.ಯನ್ನು ಹರಡಲು ಸಾಧ್ಯವಿಲ್ಲ.

ಒಬ್ಬ ವ್ಯಕ್ತಿಯು ತಮಗೆ ಸೂಚಿಸಲ್ಪಟ್ಟಿರುವ ಔಷಧಗಳನ್ನು ತೆಗೆದುಕೊಳ್ಳುವ ಸಮಯದವರೆಗೆ ರೋಗಪತ್ತೆಯಾಗದ ಸ್ಥಿತಿಯಲ್ಲಿರುತ್ತಾರೆ.

ರೋಗಪತ್ತೆಯಾಗದ ಸ್ಥಿತಿಯಲ್ಲಿರುವ ವ್ಯಕ್ತಿಗೆ ಎಚ್.ಐ.ವಿ ವಾಸಿಯಾಗಿದೆ ಎಂದು ಅರ್ಥವಲ್ಲ, ಆದರೆ ಇದು ಎಚ್.ಐ.ವಿಯನ್ನು ತಡೆಗಟ್ಟುವ ಉತ್ತಮ ವಿಧಾನಗಳಲ್ಲಿ ಒಂದಾಗಿದೆ.  

ಎಚ್.ಐ.ವಿಯೊಂದಿಗೆ ಜೀವಿಸುತ್ತಿರುವ ಕೆಲವರಲ್ಲಿ ಪತ್ತೆಯಾಗಲಾರದ ರೋಗಾಣುಗಳು ಇರುವುದಿಲ್ಲ. ಅಂಥವರು ಕೂಡ ಎಚ್.ಐ.ವಿ. ತಡೆಗಟ್ಟುವ ಸಾಧನಗಳಾದ ಕಾಂಡೋಂ ಮತ್ತು ಪಿ.ಆರ್.ಈ.ಪಿಗಳನ್ನು ಬಳಸಿ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬಹುದು.

ಹೆಚ್ಚಿನ ಮಾಹಿತಿಗಾಗಿ TheBody ಅಥವಾ www.UequalsU.org ನೋಡಿರಿ. (ಇಂಗ್ಲೀಷ್ ಭಾಷೆಯಲ್ಲಿನ ಮಾಹಿತಿಗಾಗಿ ಲಿಂಕ್)

Recently viewed articles

Related articles