Nothing found
Thank you! Your submission has been received!
Oops! Something went wrong while submitting the form.

ನನ್ನ ದೇಶದಲ್ಲಿ PrEP ಲಭ್ಯವಿದೆಯೇ?

ಟ್ರುವಾಡಾ ಡೆಸ್ಕೊವಿ, ಟೆನ್ವಿರ್ EM ಅಥವಾ TDF/FTC ನಂತಹ ಇತರ ಜೆನೆರಿಕ್ ಔಷಧಗಳನ್ನು ಮೂಲತಃ HIV ಪಾಸಿಟಿವ್ ವ್ಯಕ್ತಿಗಳಲ್ಲಿನ ರೋಗಾಣುಗಳೊಂದಿಗೆ ಹೋರಾಡಲು ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಈ ಔಷಧಗಳನ್ನು ರೋಗಾಣುವಿನ ಸಂಪರ್ಕಕ್ಕೆ ಬಂದ HIV-ನೆಗೆಟಿವ್ ವ್ಯಕ್ತಿಗಳು ಕೂಡಾ ಸೋಂಕು ತಡೆಗಟ್ಟಲು ಬಳಸಬಹುದು ಎಂಬುದು ಈಗ ನಮಗೆ ತಿಳಿದುಬಂದಿದೆ. ಪ್ರಸ್ತುತ ಯು.ಎಸ್. ಫುಡ್ ಅಂಡ ಡ್ರಗ್ ಎಡ್ಮಿನಿಸ್ಟೇಷನ್, ಟ್ರುವಾಡಾ ಮತ್ತು ಡೆಸ್ಕೊವಿಯನ್ನು PrEP ಎಂದು ಅನುಮೋದಿಸುತ್ತದೆ ಮತ್ತು ಅದೇ ರೀತಿ ಪೆರು, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಕೀನ್ಯಾ, ಇಸ್ರೇಲ್ ಮತ್ತು ಕೆನಡಾ ದೇಶಗಳ ತತ್ಸಮಾನ ಸರ್ಕಾರೀ ಸಂಸ್ಥೆಗಳೂ ಅನುಮೋದಿಸುತ್ತವೆ. ಇತರ ಬಗೆಯ ಜೆನೆರಿಕ್ PrEP ಔಷಧಗಳನ್ನು ಕೆಲವು ದೇಶಗಳಲ್ಲಿ ಅನುಮೋದಿಸಲಾಗಿದೆ.

ಥೈಲ್ಯಾಂಡ್ ಮತ್ತು ಬ್ರೆಜಿಲ್ ನಂತಹ ಕೆಲವು ದೇಶಗಳಲ್ಲಿ PrEP ಕೆಲ ವ್ಯಕ್ತಿಗಳಿಗೆ ಕ್ಲಿನಿಕಲ್ ಟ್ರಯಲ್ ಗಳ ಮೂಲಕ ದೊರೆಯುತ್ತದೆ. ಇತರ ಹಲವಾರು ದೇಶಗಳಲ್ಲಿ ಕಾರ್ಯಕರ್ತರು PrEP ನ ಲಭ್ಯತೆಯ ಬಗ್ಗೆ ಬೇಡಿಕೆಯಿಡುತ್ತಿದ್ದಾರೆ. ಆದಾಗ್ಯೂ ಅವರ ಉದ್ದೇಶ ಈವರೆಗೂ ಈಡೇರಿಲ್ಲ.

ಪ್ರತ್ಯೇಕ ದೇಶಗಳ ಬಗೆಗಿನ ಮಾಹಿತಿಗಾಗಿ PrEP ವಾಚ್ ನೋಡಿರಿ.

Recently viewed articles

Related articles